ಸ್ವಲ್ಪ ದಿನದ ಹಿಂದೆ ವಿಜಯಕರ್ನಾಟಕದಲ್ಲಿ ಬಂದ ಸ್ಪೂರ್ತಿಯ ಸೆಲೆ ಇದು. "ಕೊಳೆತ ಭಾಗವನ್ನು ಕತ್ತರಿಸಿ ಸೇವಿಸ ಬಹುದು" ಅನ್ನುವ ಸಾಲಿತ್ತು ಅದರಲ್ಲಿ. ವಿಶ್ವೇಶ್ವರ ಭಟ್ರಿಗೆ ಇಮೇಲ್ ಮಾಡಿ, " ಕೊಳೆತ ಭಾಗವನ್ನು ಸೇವಿಸಬಹುದು.... ????? ಯಾವ ಸೀಮೆ ಕನ್ನಡಾ ನಿಮ್ಮದು ಸ್ವಾಮಿ? ಕೊಳೆತ ಸೇಬು ತಿನ್ನೋದು ಸ್ಪೂರ್ತಿನಾ ನಿಮಗೆ? " ಅಂತ ಕೇಳಿದ್ದೆ. ಅದಕ್ಕೆ ಅವರ ಉತ್ತರವೂ ಬಂತು ಈ ಕೆಳಗಿನಂತೆ.
2010/6/19 Vishweshwar Bhat <vbhat@vijaykarnataka.com>
tamma, sariyaagi odammaa.
VB
ಅವರೇ ಹೇಳಿದ್ರಲ್ಲವೇ, ಸರಿಯಾಗೋ ಓದು ಅಂತ, ಓದಿದೆ. ಎಂತೆಂಥವುಗಳು ಸಾರ್ ಎಂತೆಂಥ ಮಾತುಗಳು. ಅವರ ಪತ್ರಿಕೆ ಓದುಗರು, ಸುಶಿಕ್ಷಿತರು, ತಿಳುವಳಿಕೆ ಇರುವಂಥವರುಗಳು ಅನ್ನುವದೆಲ್ಲ ಮರೆತೇ ಹೋಗಿದೆ ಅವರಿಗೆ. ವಟ್ಟಿನಲ್ಲಿ ತಂದೆಲ್ಲಿಇಡಲಿ ಅನ್ನುವಂತೆ ಚಪ್ಪಲಿ ಹೇಗೆ ಬಿಚ್ಚಬೇಕು , ಡೋರ್ ಮ್ಯಾಟ್ ಗೆ ಕಾಲು ಹೇಗೆ ವರೆಸಿಕೊಳ್ಳಬೇಕು, ಉಂಗುರ ಎಷ್ಟು ಹಾಕಿಕೊಳ್ಳಬೇಕು ಅಂತೆಲ್ಲಾ ಬರೆದಿದ್ದಾರೆ. ದುಡ್ಡುಕೊಟ್ಟು ಇವರ ಇಂಥ ವಣಶು೦ಟಿ ಪುರಾಣ ಕೇಳಬೇಕಾ ನಾವು? ಅವರ ಬರಹಗಳನ್ನೇ ಮತ್ತಷ್ಟು ಸರಿಯಾಗಿ ಓದಿ ಅವರಿಗೆ ಮರುಉತ್ತರ ಬರೆದಿದ್ದೇನೆ ಈ ಕೆಳಗಿನಂತೆ. ಅವರಿಂದ ಉತ್ತರ ಬಂದೀತಾ ...... ...... ?? ಕಾದು ನೋಡೋಣ.
............................................
"ಕುತ್ತಿಗೆ ಹಿಚುಕಿ ಕೊಲೆ" " ಸಾರಿಗೆ ಬಸ್ ಹರಿದು ಸಾವು" ಅಂತೆಲ್ಲಾ ವಿಜಯಕರ್ನಾಟಕ ಬರೆದಾಗ ಅದರ ಅರ್ಥ ಯಾರ ಕುತ್ತಿಗೆಯನ್ನು ಹಿಚುಕಲ್ಪಟ್ಟಿದೆಯೋ ಅವನದ್ದೇ ಸಾವು ಅನ್ನುವ ಅರ್ಥ ಅಲ್ಲವೇ? ಅಥವಾ ಯಾರಮೇಲೆ ಬಸ್ ಹರಿದಿದೆಯೋ ಅವನೇ ಸತ್ತಿದ್ದಾನೆ ಅನ್ನುವದು ಸರಿಯಾದರೆ ಇಲ್ಲಿ ನಿಮ್ಮ ಮಾತು "ಕೊಳೆತ ಸೇಬುವನ್ನು ತಿನ್ನಬಹುದು ಎಂದೇ ಅರ್ಥ. ಅದನ್ನ ಅಮ್ಮ ತಮ್ಮ ಅಜ್ಜ ಮುತ್ತಜ್ಜ ಕಾಕಾ ಮಾಮಾ ಯಾರು ಓದಿದರೂ ಅದೇ ಅರ್ಥ. ಅದು ತಪ್ಪಲ್ಲ ಅ೦ದರೆ ಯಾಕೆ ತಪ್ಪಲ್ಲ ಅನ್ನುವದನ್ನ ಸಾಧಿಸಿ. ಅದನ್ನ ಬಿಟ್ಟು ಇನ್ನೊಂದು ಸಭ್ಯಸಾಚಿ ಅಂಥದ್ದೇ ಹಿಂದುಮುಂದಿಲ್ಲದ ಒಂದುಸಾಲಿನ ಉತ್ತರ ಬರೆದರೆ ಹ್ಯಾಗೆ ಸ್ವಾಮೀ? ಮೂರು ರುಪಾಯಿ ಓದುಗ ಅನ್ನುವ ಅಸಡ್ಡೆಯೇ?
ನನಗೆ ತಪ್ಪಿ ಹೋದ ಕೆಲವು ಅದ್ಭುತ ಸಾಲುಗಳು ನಿಮ್ಮ ಜೂನ್ ೨೪ ರಂದು ಬರೆದ ನೂರೆಂಟು ಮಾತು ನಲ್ಲಿ ಮತ್ತೆ ಸಿಕ್ಕಿತು. ಎಂಥೆಂತ ಮಾತುಗಳು ಸಂಪಾದಕರೆ. ಅದಲ್ಲದೆ ನೀವೇ ಬರೆದ ಮತ್ತೂ ಕೆಲವು ಸಾಲುಗಳ ಸ್ಯಾಂಪಲ್ಲು ಅದಕ್ಕೆ ನನ್ನ ಕಮೆಂಟು ಇಲ್ಲಿ ಹಾಕಿದ್ದೇನೆ ಸ್ವಲ್ಪ ನೋಡಿ.
>> ಅಗ್ನಿಶಾಮಕ ದಳದವರನ್ನು ಚೆನ್ನಾಗಿ ನೋಡಿಕೊಳ್ಳಿ. ಅವರ ಜತೆ ಪ್ರೀತಿ, ಗೌರವದಿಂದ ವರ್ತಿಸಿ. ಕಾರಣ ಅವರು ಮಾಡುವ ಕೆಲಸ ನಮ್ಮಿಂದ ಅಸಾಧ್ಯ.
ಅಗ್ನಿಶಾಮಕ ದಳದವರನ್ನು ಮಾತ್ರ ಯಾಕೆ? ಪ್ರತಿಯೊಬ್ಬರೂ ಅವರವರ ಕೆಲಸದಲ್ಲಿ ಅವರು ಅನುಭವಿಗಳೇ. ಡಾಕ್ಟರ್, ಕಲಾವಿದ, ಸಂಗೀತಗಾರ, ಪ್ಲಂಬರ್, ಜಲಮಂಡಳಿಯ ಕಾರ್ಮಿಕ, ಹೂಮಾಲೆ ಕಟ್ಟುವ ಹೆ೦ಗಸು, ರೇಲ್ವೆ ಸ್ಟೇಶನ್ ಕೂಲಿ, ಹೀಗೆ ಯಾರಾದರು ಬಂತು ಅವರ ಕ್ಷೇತ್ರದಲ್ಲಿ ಅವರೆಲ್ಲ ಸಾಧಕರೆ. ಅವರು ಮಾಡುವಕೆಲಸವನ್ನು ನಮ್ಮಿಂದ ಮಾಡಲು ಸಾಧ್ಯವಿಲ್ಲ. ನೀವೇ ವಿಚಾರ ಮಾಡಿ, ಜಲಮಂಡಳಿಯ ಕಾರ್ಮಿಕನೊಬ್ಬ ಮಾಡುವಂತೆ ಮ್ಯಾನ್ ಹೋಲ್ ಸ್ವಚ್ಚ ಮಾಡುವಕೆಲಸವನ್ನು ಯಾವತ್ತಾದರೂ ನೀವು ಅಥವಾ ನಾವು ಮಾಡಲು ಸಾಧ್ಯವಾ? ಮತ್ತೆ ಅಗ್ನಿಶಾಮಕ ದಳದವರನ್ನು ಚನ್ನಾಗಿ ನೋಡಿಕೊಳ್ಳಿ ಅಂದರೆ ಏನರ್ಥ? (ಅವರನ್ನು ಚೆನ್ನಾಗಿ ನೋಡಿಕೊಳ್ಳಬಾರದು ಅನ್ನುವದು ನನ್ನ ವಾದವಲ್ಲ, ಅವರನ್ನು ಮಾತ್ರ ಯಾಕೆ ಅನ್ನುವದು ಪ್ರಶ್ನೆ, ಗಮನಿಸಿ. )
>> ಗೆದ್ದವರಿಗೂ ಸೋತವರಿಗೂ ಹೆಚ್ಚು ವ್ಯತ್ಯಾಸವಿಲ್ಲ . ಗೆದ್ದವರು ಮಾಡುತ್ತಾರೆ. ಸೋತವರು ಮಾಡುವುದಿಲ್ಲ.
ಈ ಮಾತಿಗೆ ಸೆನ್ಸಾರ್ ಮಂಡಳಿ "ಎ" ಸರ್ಟಿಫಿಕೇಟು ಕೊಡುತ್ತದೆ. "ಯು" ಬೇಕಾದಲ್ಲಿ ಏನನ್ನು ಮಾಡುತ್ತಾರೆ ಅನ್ನುವದನ್ನು ಹೇಳಬೇಕಾಗುತ್ತದೆ.
>> ಯಾರಾದರೂ ಹಣದ ಸಹಾಯ ಬಯಸಿದರೆ ಇಲ್ಲವೆನ್ನಬೇಡಿ. ಹಣಕ್ಕಿಂತ ಸ್ನೇಹ ಮುಖ್ಯ.
ನನಗೊಂದು ಐದು ಲಕ್ಷ ಸಾಲ ಬೇಕಿತ್ತು ಭಟ್ರೇ ತುಂಬಾ ಅನಿವಾರ್ಯತೆ ಇದೆ, ಸಾಧ್ಯವಾದಾಗ ತೀರಸ್ತೇನೆ. ಸ್ನೇಹಕ್ಕೆ ನಮ್ಮ ಇಮೇಲ್ ವಿಳಾಸ ಫೋನ್ ನಂಬರ್ ಕೊಡ್ತೀನಿ ಆರ್ಕುಟ್ ನಲ್ಲಿ ಪ್ರೆಂಡ್ ಲಿಸ್ಟ್ ನಲ್ಲೂ ಹಾಕಿಕೊಳ್ತೆನೆ. ಸಾಲ ಸಿಗತ್ತಾ? ಅಥವಾ "ಪುರಾಣ ಓದೋಕೆ ಬದನೇಕಾಯಿ ತಿನ್ನೋಕೆ" ವಾದವೋ ಇದು ?
>> ಚಪ್ಪಲಿಯನ್ನು ಕಳಚಿದಾಗ ಅಕ್ಕಪಕ್ಕದಲ್ಲಿಯೇ ಇಡಿ. ಯಾಕೆಂದರೆ ನಿಮ್ಮ ಕಾಲು ಒಂದರ ಪಕ್ಕದಲ್ಲಿಯೇ ಒಂದು ಇದೆ ತಾನೆ?
ಹೆಲ್ಮೆಟ್ ಕಳಚಿ ತಲೆಯಪಕ್ಕದಲ್ಲಿ, ವಾಚ್ ಕಳಚಿ ಕೈ ಪಕ್ಕದಲ್ಲಿ ಇಟ್ಕೊಬೇಕಾ? ಹಾಗೆ ಇನ್ಯಾವದನ್ನ ಕಳಚಿ ಎಲ್ಲಿ ಎಲ್ಲಿ ಇಡಬೇಕು? ಅಂದಹಾಗೆ , ಪಕ್ಕದವರ ಕಾಲೂ ನಿಮ್ಮ ಕಾಲಿನ ಪಕ್ಕದಲ್ಲಿಯೇ ಇರಬಹುದು ಹುಷಾರು.
>> ಒಂದು ಕೈಗೆ ಹೆಚ್ಚೆಂದರೆ ಎರಡು ಉಂಗುರಗಳಿಗಿಂತ ಜಾಸ್ತಿ ಉಂಗುರಗಳನ್ನು ಧರಿಸಬೇಡಿ, ಹತ್ತೂ ಬೆರಳುಗಳಿಗೆ ಧರಿಸುವಷ್ಟು ಸಾಮರ್ಥ್ಯ ನಿಮಗಿರಬಹುದು.
ಯಾಕೆ? ಉಂಗುರ ಧರಿಸುವದು ಅಸಭ್ಯತೆಯೋ ?
>> ನಿಮ್ಮ ಕೈಗಡಿಯಾರವನ್ನು ಹತ್ತು ನಿಮಿಷ ಮುಂದಕ್ಕಿಟ್ಟುಕೊಳ್ಳಿ. ನೀವು ಸದಾ ಸಮಯ ಪಾಲನೆ ಮಾಡುತ್ತೀರಿ.
ಹತ್ತು ನಿಮಿಷ ಮುಂದಿಡುವವರು ನಾವೇ ಆದಮೇಲೆ, ಅದು ಮುಂದಿದೆ ಅನ್ನುವದು ಗೊತ್ತಿರುತ್ತದೆ. ಅದು ಹೇಗೆ ಸಮಯ ಪಾಲನೆಗೆ ಸಹಾಯವಾಗುತ್ತದೆ? ವಿವರಿಸ್ತೀರಾ ಅಟ್ ಲೀಸ್ಟ್ ಒಂದು ಸಾಲಿನಲ್ಲಿ ?
>>ಜನರು ನಿಮ್ಮ ಪ್ರತಿ ನಡೆ- ನುಡಿಯನ್ನು ಗಮನಿಸುತ್ತಾರೆ. ಈ ಎಚ್ಚರದಿಂದಲೇ ವರ್ತಿಸಿ. ಎಚ್ಚರ ತಪ್ಪಬೇಡಿ.
ನಮಗಿಂತ ಸಾರ್ವಜನಿಕ ಜೀವನದಲ್ಲಿ ಇರುವಂಥ ನಿಮಗೇ ಈ ಮಾತು ಸೂಕ್ತ. ನಿಮ್ಮ ಚೆಂಬರಿನಲ್ಲಿ ಈ ಸಾಲು ತುಂಬಾ ಮುದ್ದಾಗಿ ಕಾಣುತ್ತದೆ ಅನ್ನಿಸುತ್ತದೆ ನನಗೆ.
>> ಪುಸ್ತಕ ಓದುವದು ಒಳ್ಳೆಯ ಅಭ್ಯಾಸ. ಆದರೆ ಕದಿಯುವ ಚಟ ಕೆಟ್ಟದ್ದು.
????????? ಹಂಗಂದ್ರೆ?
>> ಎಸ್ಎಂಎಸ್ ಗಳನ್ನು ವಿಪರೀತ ಸಾಂಕೇತಿಕ ಭಾಷೆಯಲ್ಲಿ ಕಳಿಸದಿರಿ. ಇದರಿಂದ ಅದರ ವಕ್ಕಣಿಕೆ ಅರ್ಥವಾಗಲಿಲ್ಲ.
ನಿಮಗಾದ್ರು ಇದರ ವಕ್ಕಣಿಕೆ ಅರ್ಥ ಆಯ್ತಾ? (ಇದಕ್ಕೆ ಸಾಕ್ಷಿ ಇಲ್ಲಿದೆ )
>> ಇ ಮೇಲ್ ಗಳಿಗೆ ಬೇಗ ಉತ್ತರಿಸಿ. ನಿಮಗೊಂದು ಮೇಲ್ ಕಳಿಸಿದ್ದೆ. ನೋಡಿದಿರಾ ಎಂದು ಅದನ್ನು ಕಳಿಸಿದವರು ಫೋನ್ ಮಾಡಿ ತಿಳಿಸುವಂತಾಗಬಾರದು. ಹಾಗಿದ್ದರೆ ಅವರು ಫ್ಯಾಕ್ಸ್ ಪತ್ರವನ್ನೇ ಕಳಿಸುತ್ತಿದ್ದರು
ಅಥವಾ ಪಾರಿವಾಳದ ಕಾಲಿಗೆ ಚೀಟಿ ಕಟ್ಟಿ ಕಳಿಸುತ್ತಿದ್ದರೋ? ಫ್ಯಾಕ್ಸ್, ಪತ್ರ, ಮತ್ತು ಇಮೇಲ್ ಗೆ ಬಹಳ ವ್ಯತ್ಯಾಸವಿದೆ ಭಟ್ರೇ, ಅರ್ಥ ಮಾಡ್ಕೊಳ್ಳಿ ಮೊದಲು.
>> ಪತ್ರಿಕೆಗಳಿಗೆ ಬರೆಯಿರಿ. ಕನಿಷ್ಠ `ಸಂಪಾದಕರ ಪತ್ರ' ವಿಭಾಗಕ್ಕಾದರೂ ಬರೆಯಿರಿ.
ಮೇಲೆ ಹೇಳಿದಹಂಗೆ ಉತ್ತರ ಬರಿತಿರಾ ತಿರುಗಿ?
ನಿಮಗೆ ನಾನು ಬರೇ ಸಭ್ಯ ಸಾಚಿ, ಸ್ಪೂರ್ತಿಯ ಸೆಲೆ ಹಿಂದೆ ಬಿದ್ದಂತೆ ಕಾಣಬಹುದು ಈ ಮೇಲಿನ ಎಲ್ಲ ಸಾಲುಗಳಿಂದ. ಆದರೆ ಇವು ಉದಾಹರಣೆಗಳುಮಾತ್ರ . ಇಂಥ ಬಹಳ ಬಹಳ ಸಿಗುತ್ತದೆ - ದಿನ, ಪ್ರತಿ ದಿನ. ಮತ್ತೆ ಅದಕ್ಕೆ ಉದಾಹರಣೆ ಬೇಕಾದರೆ "ವರ್ಷದ ವ್ಯಕ್ತಿಯನ್ನು ಚಟ್ಟಕ್ಕೆ ಏರಿಸಿದ್ದು" "ಸುರಪುರ ತಾಲೂಕಿಗೆ ಶವ ಬೇಕಾಗಿದ್ದು" "ಕರಡಿಯ ಸಾವಿನ ಸುದ್ದಿ" ಇಂಥ ಈನು ಹಲವು ಹತ್ತು ತಪ್ಪು ನಿಮ್ಮ ಗಮನಕ್ಕೆ ಬಂದಿರಬೇಕಲ್ಲವೇ? ಅ೦ಕಿ ಅಂಶಗಳಂತೂ ಒಂದೊಂದು ಪುಟಕ್ಕೆ ಒಂದೊಂದು ಇರುತ್ತದೆ, ಯಾವದು ಸರಿಯೋ ಯಾವುದು ತಪ್ಪೋ ಆ ವಿಶ್ವೇಶ್ವರನಿಗೆ ಗೊತ್ತು. ಇನ್ನು ಅಜಯ್ ಕುಮಾರ್ ಸಿಂಹರ ಸ್ಪಷ್ಟೀಕರಣದ ಪತ್ರವನ್ನು ಅರ್ಧಮರ್ಧ ಪ್ರಕಟಿಸಿ ನೀವು ಹಬ್ಬಿಸುವ (ಗಾಳಿ) ಸುದ್ದಿಗಳು ಎಷ್ಟು ನಂಬಿಕೆ ಅರ್ಹ ಎಂದು ತೋರಿಸಿದಿರಿ. ಅದರ ಪೂರ್ಣ ಆವೃತ್ತಿ ಇಲ್ಲಿದೆ ಬೇಕಾದರೆ ಓದಿ ನೋಡಿ.
ಇನ್ನು ಆರ್ಕುಟ್ ಹೇಗೆ ಹುಟ್ಟಿತು ಎನ್ನುವಂಥ ಒಂದು ಸ್ಪ್ಯಾಮ್ ಮೇಲ್ ನಿಮ್ಮಲ್ಲಿ ಸುದ್ದಿಯಾಗಿ ಪ್ರಕಟವಾಗುತ್ತದೆ. ಇಮೇಲ್ ಫಾರ್ವರ್ಡ್ ಮಾಡಿದರೆ ೩ ಡಾಲರ್ ಮಗುವಿನ ಅಕೌಂಟ್ ಗೆ ಜಮೆಯಾಗುತ್ತದೆ ಅನ್ನುವದು ಸಹ ನಿಮ್ಮ ಲವಲವಿಕೆಲಿ ಅರ್ಧ ಪುಟದ ಸುದ್ದಿ. ಸುಮ್ಮನೆ ಒಂದು ಸ್ಪ್ಯಾಮ್ ಇಮೇಲ್ ಜವಾಬ್ದಾರಿಯುತವಾದ (??) ಒಂದು ಪತ್ರಿಕೆಯಲ್ಲಿ ಅರ್ಧ ಪುಟದ ಪುರ್ವಾಪರವಿಲ್ಲದ ಒಂದು ಸುದ್ದಿಯಾಗುತ್ತದೆ ಅಂದರೆ, ಇದನ್ನ ನಾನು ಪತ್ರಿಕೆ ಯಾವ ಹಾದಿ ಹಿಡಿಯುತ್ತಿದೆ ಅನ್ನುವದನ್ನ ತೋರುತ್ತದೆ ಅಂದ್ಕೊಳ್ಳುತ್ತೇನೆ. ಕನ್ನಡದಲ್ಲಿ ಬೋರೆದ್ದು ಹೋದ ಜಡಗಟ್ಟಿದ ಪತ್ರಿಕೋದ್ಯಮಕ್ಕೆ "ಹೊಸತನದ ಹರಿಕಾರ"ರಾಗಿ ಬಂದವರು ಇವತ್ತು ತಿರಾ ಹೊಸತನದ ಹಿಂದೆ ಬಿದ್ದು ಹೊಲಸುತನದ ಹರಿಕಾರರೂ ಆಗಿದ್ದೀರಿ. ಇನ್ನು ನಿಮ್ಮ ಏಕಮುಖದ, ಪುರ್ವಾಪರವಿಲ್ಲದ ತನಿಖಾವರದಿಗಳು, ತ್ರಾಸುಪಟ್ಟು ಪ್ರಾಸವಾಗಿ ಬರೆಯುವ ನಿಮ್ಮ ಹೆಡ್ಡಿಂಗುಗಳೆಲ್ಲ ನಿಮಗೆ ಇಷ್ಟ ವಾಗಬೇಕು.
ನಿಮ್ಮ , ನಿಮ್ಮ ಪತ್ರಿಕೆಯ ಮೇಲಿನ ಮೊದಲಿದ್ದ ನಂಬಿಕೆಯ ಗೋಡೆ ಓದುಗರ ಮನದಲ್ಲಿ ಶಿಥಿಲವಾಗಿದೆ. ಬಹುಷಃ ಇವತ್ತು ಲಕ್ಷದ ಲೆಕ್ಕದಲ್ಲಿ ಕಡಿಮೆಯಾದ ನಿಮ್ಮ ಸರ್ಕ್ಯುಲೇಶನ್ ಅದನ್ನೇ ಹೇಳುತ್ತಿದೆ. ಜನ ವಿಜಯ ಕರ್ನಾಟಕದಿಂದ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು, ಆದರೆ ನಿಮ್ಮ ಈ ಅಹಮಿಕೆ, ತನ್ನ ಬಿಟ್ಟರಿಲ್ಲ ಅನ್ನುವ ಅತಿ ಆತ್ಮವಿಶ್ವಾಸ, ಅಥವಾ ತಾನೇ ಸರಿ ಅನ್ನುವ ವಿತಂಡ ವಾದ, ಒಟ್ಟಿನಲ್ಲಿ ಒಂದು ಸುದ್ದಿ, ಅದನ್ನ ತುರುಕಿದರೆ ಆಯಿತೆನ್ನುವ ಹಪಹಪಿತನ ಪತ್ರಿಕೆ ಇವತ್ತು ಇಂಥ ಮಟ್ಟಕ್ಕೆ ಬರಲು ಕಾರಣ. ನನ್ನ ಆಪ್ತವಲಯದಲ್ಲೇ ವಿ.ಕ. ಪತ್ರಿಕೆ ಬಿಟ್ಟು ಬೇರೆಯದಕ್ಕೆ ಎಷ್ಟೆಲ್ಲಾ ಮಂದಿ ಬದಲಾಗಿದ್ದಾರೆ. ಬದಲಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಯಾವತ್ತು ಒಂದು ಒಳ್ಳೆಯ ಪತ್ರಿಕೆ ಹಾಳಾಗಿ ಹೋಗಬಾರದೆಂಬ ಇಚ್ಚೆಯಿಂದ ಇಂಥ ಒಂದು ಉದ್ದ ಉದ್ದದ ಪತ್ರ ಬರೆಯಬೇಕಾಯಿತು.
ನೀವೇ ಹೇಳಿದಂತೆ, "ಇಮೇಲ್ ಗಳಿಗೆ ಬೇಗ ಉತ್ತರಿಸಿ. ನಿಮಗೊಂದು ಮೇಲ್ ಕಳಿಸಿದ್ದೆ. ನೋಡಿದಿರಾ ಎಂದು ಅದನ್ನು ಫೋನ್ ಮಾಡಿ ತಿಳಿಸುವಂತಾಗಬಾರದು". ಉತ್ತರದ ನಿರೀಕ್ಷೆಯಲ್ಲಿದ್ದೇನೆ.
Dear VB,
ತಮ್ಮಾ ಅಮ್ಮಾ ಅಂತೆಲ್ಲ ನೀವು ರಿಪ್ಲಾಯ್ ಬರೆಯುತ್ತೀರಿ ಅ೦ದ್ಕೊ೦ಡೇಇರ್ಲಿಲ್ಲ. ಕಳೆದ ಎಂಟು ಹತ್ತು ದಿನ ಊರಲ್ಲಿ ಇರಲಿಲ್ಲ ,ಇಮೇಲ್ ನೋಡಲಿಲ್ಲ. ಹಾಗಾಗಿ ಸ್ವಲ್ಪ ತಡವಾಗಿ ನಿಮ್ಮ ಈ ಒ೦ದುಸಾಲಿನ ಉತ್ತರಕ್ಕೆ ನನ್ನ ಸಾಲುಸಾಲು ಮರು ಉತ್ತರ. ಈಗ ವಿಷಯಕ್ಕೆ ಬರೋಣ.

***********************************
2010/7/1 Vishweshwar Bhat
Camp : Los Angeles, USA
2010/7/1 Vishweshwar Bhat
Camp : Los Angeles, USA
Dear Harsha,
Thank you very much for your mail. I have noted all the points.
My best
Vishweshwar ಭಟ್
******************
ನಮಸ್ಕಾರ,
ತಮ್ಮ ಪ್ರತ್ಯುತ್ತರಕ್ಕೆ ನನ್ನ ಧನ್ಯವಾದಗಳು. ತಮ್ಮಿಂದ ಸ್ವಲ್ಪ ವಿವರವಾದ ಉತ್ತರ ನಿರೀಕ್ಷಿಸುತ್ತಿದ್ದೆ, ಮತ್ತೊಂದು ಪುಟ್ಟ ಇಮೇಲ್ ನಲ್ಲೆ ಮುಗಿಸಿಬಿಟ್ಟಿರಿ. ಇರಲಿ ವಿದೇಶ ಪ್ರಯಾಣದಲ್ಲಿ ಇದ್ದಿರೆ೦ದಾಯಿತು, ಇಂಥ ಸಮಯದಲ್ಲಿ ತಮ್ಮಿಂದ ಬಹಳಷ್ಟನ್ನು ನಿರೀಕ್ಷಿಸುವದು ತಪ್ಪು. ತಮ್ಮ ಉತ್ತರಗಳನ್ನು ಮುಂದಿನ ಪತ್ರಿಕೆಗಳೇ ಹೇಳುತ್ತದೆ ಅನ್ನುವ ನಿರೀಕ್ಷೆಯಲ್ಲಿ ಇದ್ದೇನೆ.
ತಮಗೆ ಕಳಿಸಿದ್ದ ಇಮೇಲ್ ನ ಪ್ರತಿಯನ್ನು ನನ್ನ ಬ್ಲಾಗ್ ನಲ್ಲೂ ಹಾಕಿಕೊಂಡಿದ್ದೆ. ಸಮಯ ಸಿಕ್ಕಾಗ ಮತ್ತೆ ಕೆಲವು ಜನರ ಅಭಿಪ್ರಾಯ ಏನು ಅನ್ನುವದನ್ನ ಸಮಯ ಸಿಕ್ಕಾಗ ಅಲ್ಲಿನ ಕಾಮೆಂಟ್ ನಲ್ಲಿ ನೋಡಿ. ಮತ್ತೆ ಯಾವಾಗಲಾದರು ಹೀಗೆ ಭೇಟಿಯಾಗೋಣ.
--
Harsha Bhat

13 comments:
ಹರ್ಷ,
ಒಂದು ದಿನದ VK ಹೊಲಸಾಗಿದ್ದರೆ, ಅದನ್ನು ಕೊಳೆತ ಸೇಬು ಎಂದು ಕರೆದು ಅದರಲ್ಲಿ ಕೊಳೆತ ಭಾಗವನ್ನು ಕಿತ್ತೆಸೆದು ಉಳಿದದ್ದನ್ನು(ಏನಾದರು ಉಳಿದರೆ) ಸ್ವೀಕರಿಸಬಹುದು. ಇಡೀ ಸೇಬುವೇ ಕೊಳೆತಾಗ ಹೇಗೇ ತಿಂದರೂ ’ಕೊಳೆತ ಭಾಗವನ್ನು ಕತ್ತರಿಸಿ ತಿಂದ’ಹಾಗೆಯೆ! ಅದು ಬೇರೆ ವಿಚಾರ!!
ಆದರೆ ಪ್ರತಿದಿನವೂ ಕೊಳೆತ ಸೇಬು ಸಿಕ್ಕುತ್ತಿದೆಯೆಂದಾದರೆ ಆಗ, ಆ ಅಂಗಡಿಯವನನ್ನೆ ’ಕೊಳೆತ ಸೇಬು (ಮಾರುವವನು)’ ಎನ್ನಬಹುದು.
ಕೊಳೆತಿಲ್ಲದ ಭಾಗ ಸ್ವಲ್ಪವಾದರು ಉಳಿದಿದ್ದಲ್ಲಿ ನಿಮ್ಮ ಈಮೇಲ್’ಗೆ ಒಂದು ಜವಬ್ದಾರಿಯುತ ಉತ್ತರ ಬರಬಹುದು.
ಇಮೇಲ್ ಫಾರ್ವರ್ಡ್ ಮಾಡಿದರೆ ಅಕೌಂಟಿಗೆ ಹಣ ಜಮೆಯಾಗುತ್ತದೆ ಎಂಬುದನ್ನು ಈ ಸಭ್ಯಸಾಚಿಗಳು ಯಾವುದೇ ಹಿಂದೆ ಮುಂದೆ ತಿಳಿಯದೇ ಪ್ರಕಟಿಸಿದ್ದೇ ಅದೆಷ್ಟು ಕೊಳೆತಿದೆ ಎಂಬುದಕ್ಕೆ ಸಾಕ್ಷಿ. ಇಂತ ಚಿಕ್ಕ ವಿಷಯಗಳನ್ನೂ ಪರಿಶೀಲಿಸದೇ ಪ್ರಕಟಿಸುವವರು ಅದೇನು ಪತ್ರಿಕೆ ನೆಡೆಸುತ್ತಾರೋ! ನಾನು ಎಲ್ಲರಿಗೂ ಉಪದೇಶ ಕೊಡುತ್ತಿದ್ದೆ ಇಂತ ಇಮೇಲೆ ಮೆಸೇಜು ಫಾರ್ವರ್ಡ್ ಮಾಡಬೇಡಿ ಅಂತ, ಈಗ ಅವರೆಲ್ಲಾ ವಿ.ಕ.ದ ಆಧಾರ ತೋರಿಸುತ್ತಿದ್ದಾರೆ! :) ತಪ್ಪು ಒಪ್ಪಿಕೊಂಡು ಉತ್ತರ ಕೊಟ್ಟು ಸಭ್ಯಸಾಚಿಗಳಾಗುತ್ತಾರೋ ಅಥವಾ ಜನರಿಗೆ ಕೊಳೆತ ಸೇಬು ತಿನ್ನಿಸುತ್ತಲೇ ಇರುತಾರೋ ನೋಡೋಣ.
ನಿಮ್ಮ ಲೇಖನ ಓದಿದ ಮೇಲೆ ಒಂದು ಕಾಮೆಂಟ್ ಬರಿಯೋಣ ಅನ್ಸ್ತು.
"ಕೊಳೆತ ಭಾಗವನ್ನು ಕತ್ತರಿಸಿ ಸೇವಿಸ ಬಹುದು" . ಈ lineಗಿಂತ ಮೊದಲು ಇನ್ನೊಂದು line ಇದೆ. "ತುಸು ಕೊಳೆತ ಸೇಬನ್ನು ಬಿಸದ ಬೇಕಿಲ್ಲ." ಈ context ನಲ್ಲಿ ಓದಿದಾಗ ಅದು ಸಮಂಜಸ ಅನ್ಸುತ್ತೆ.
ನಿಮ್ಮ ಲೇಖನಗಳನ್ನ ಓದ್ತಾ ಇದ್ದೆ.
ಗಾ೦ಗರಿಯಾ - ಇಲ್ಲಿ ಸ್ವರ್ಗದ ಹಾದಿ ಕವಲೊಡೆಯುತ್ತದೆ.
ಈ ಲೇಖನದಲ್ಲಿ
"ಸಮುದ್ರ ಮಟ್ಟದಿ೦ದ 3043ಮೀಟರು ಎತ್ತರದಲ್ಲಿರುವ ಗರ್ವಾಲ್ ಹಿಮಾಲಯ ವ್ಯಾಪ್ತಿಯ ಈ ಊರು ಸರಿ ಸುಮಾರು ಎರಡುಸಾವಿರ ಜನಸ೦ಖ್ಯೆಯನ್ನು ಹೊ೦ದಿದೆ. ಇದು ಊರಾದರೂ ಒ೦ಥರಾ ಊರಲ್ಲ"
"ಇದು ಊರಾದರೂ ಒ೦ಥರಾ ಊರಲ್ಲ" ಇದೆ ಏನ್ ಅರ್ಥ ಕೊಡುತ್ತೆ ಸ್ವಾಮಿ ಅಂತ ನಾ ಕೇಳಿದ್ರೆ ತಪ್ಪಾಗಲ್ವಾ?
ಚಪ್ಪಲಿಯನ್ನು ಕಳಚಿದಾಗ ಅಕ್ಕಪಕ್ಕದಲ್ಲಿಯೇ ಇಡಿ. ಯಾಕೆಂದರೆ ನಿಮ್ಮ ಕಾಲು ಒಂದರ ಪಕ್ಕದಲ್ಲಿಯೇ ಒಂದು ಇದೆ ತಾನೆ?
ಇದು ಚಿಕ್ಕ ಮಕ್ಕಳಲಿಗೆ ನಾವೆಲ್ಲಾ ಹೇಳೋ ಮಾತಲ್ವಾ?
ಪುಸ್ತಕ ಓದುವದು ಒಳ್ಳೆಯ ಅಭ್ಯಾಸ. ಆದರೆ ಕದಿಯುವ ಚಟ ಕೆಟ್ಟದ್ದು.
ಇದು ನಿಮಗೆ ಅರ್ಥ ಆಗ್ಬೇಕು ಅಂದ್ರೆ ಒಮ್ಮೆ public libraryಗೆ ಹೋಗಿ ಒಂದು ರೌಂಡ್ ಮಗಜಿನೆಸ್
ಮೇಲೆ ಕಣ್ಣು ಹಾಯಿಸಿದರೆ ಅರ್ಥ ಆಗುತ್ತೆ.
ಪತ್ರಿಕೆಗಳಿಗೆ ಬರೆಯಿರಿ. ಕನಿಷ್ಠ `ಸಂಪಾದಕರ ಪತ್ರ' ವಿಭಾಗಕ್ಕಾದರೂ ಬರೆಯಿರಿ.
ಇದರ ಅರ್ಥ ಪ್ರತಿಯೊಬ್ಬರಲ್ಲೂ ಬರಿಯೋ ಸಾಮರ್ಥ್ಯ ಇದೆ ಅದನ್ನ ಉಪಯೋಗಿಸಿ ಅಂತ ಅರ್ಥ ಅಲ್ವೇನ್ರೀ?
ನೀವು ಹೇಳಿದೆ ಆರ್ಕುಟ್, ಮೇಲ್ ಫಾರ್ವರ್ಡ್ ಮಾಡಿದ್ರೆ ದುಡ್ಡು ಬರುತ್ತೆ ಅನ್ನೋದು ಅದೆಲ್ಲ ನಾನು ನಿಮ್ಮ ಜೊತೆ ದಿಕ್ಕರಿಸ್ತಿನಿ. ಆದ್ರೆ ಕೆಲವೊಂದು ಕಡೆ ನೀವು ಕೊಂಕು ತೆಗಿಲೇಬೇಕು ಅಂತಾನೆ ನೀವು comment ಮಾಡಿದ ಹಾಗಿದೆ. ಅಲ್ವಾ?
ನಾನು ನಿಮ್ಮಷ್ಟು ಒಳ್ಳೆ ಲೇಖಕ ಅಲ್ಲ. ನನ್ನ ಈ ಕಾಮೆಂಟ್ ನಲ್ಲಿ ತಪ್ಪಿದ್ದರೆ ಹೇಳಿ ತಿದ್ದು ಕೊಳ್ಳತಿನಿ.
-Best Regards,
Rakesh S Joshi
@ Rakesh
ತಮ್ಮ ಕಾಮೆಂಟ್ ಗೆ ಧನ್ಯವಾದಗಳು.
1. >> ದಯವಿಟ್ಟು ನೀವು ಹೇಳಿದ ಸಾಲನ್ನೇ ಮತ್ತೊಮ್ಮೆ ಓದಿ ನೋಡಿ, " ತುಸುಕೊಳೆತ ಸೇಬುವನ್ನು ಬಿಸಾಡಬೇಕಿಲ್ಲ." (ಇಲ್ಲಿ ಪೂರ್ಣ ವಿರಾಮವನ್ನು ಮತ್ತು ಹೊಸ ವಾಕ್ಯ ಆರಂಭ ಆಗಿದ್ದನು ಗಮನಿಸಿ). "ಕೊಳೆತಭಾಗವನ್ನು ಕತ್ತರಿಸಿ ತಿನ್ನಬಹುದು" ಇದು ಎರಡನೇಯ ಸಾಲು. ಈಗ ನನ್ನ ಬ್ಲಾಗ್ ನ ವಾಕ್ಯವನ್ನು ಪೂರ್ಣವಾಗಿ ಓದಿ. ಅದು " ಸಮುದ್ರ ಮಟ್ಟದಿ೦ದ 3043ಮೀಟರು ಎತ್ತರದಲ್ಲಿರುವ ಗರ್ವಾಲ್ ಹಿಮಾಲಯ ವ್ಯಾಪ್ತಿಯ ಈ ಊರು ಸರಿ ಸುಮಾರು ಎರಡುಸಾವಿರ ಜನಸ೦ಖ್ಯೆಯನ್ನು ಹೊ೦ದಿದೆ. ಇದು ಊರಾದರೂ ಒ೦ಥರಾ ಊರಲ್ಲ, ಶಾಶ್ವತ ನಿರ್ಮಾಣದ ಮನೆಗಳಿದ್ದೂ ಇದು ಒ೦ದು ವ್ಯವಸ್ಥಿತ ಜಾತ್ರೆ ಇದ್ದ೦ತೆ ಅ೦ದರೆ ತಪ್ಪಿಲ್ಲ." ಎಂದಿದೆ. ನೀವು ಹೇಳಿದಂತೆ ಬರೇ "ಇದು ಊರಾದರೂ ಒ೦ಥರಾ ಊರಲ್ಲ" ಎಂದಿಲ್ಲ ಅದಾದಮೆಲೊಂದು ಕಾಮಾ ಇದ್ದು ವಾಕ್ಯ ಮುಂದುವರಿದಿದೆ. Hope I made it clear. :)
2. >> ಚಪ್ಪಲಿಯನ್ನು ಕಳಚಿದಾಗ ಅಕ್ಕಪಕ್ಕದಲ್ಲಿಯೇ ಇಡಿ. ಯಾಕೆಂದರೆ ನಿಮ್ಮ ಕಾಲು ಒಂದರ ಪಕ್ಕದಲ್ಲಿಯೇ ಒಂದು ಇದೆ ತಾನೆ?
ಇದು ಚಿಕ್ಕ ಮಕ್ಕಳಲಿಗೆ ನಾವೆಲ್ಲಾ ಹೇಳೋ ಮಾತಲ್ವಾ?
ಸರಿ, ಮಕ್ಕಳಿಗೆ ಹೇಳುವ ಮಾತಾದರೆ ಅದನ್ನ ಪುಟಾಣಿ ವಿಜಯದಲ್ಲಿ ಹಾಕಲಿ, ಮುಖಕ್ಕೆ ಹೊಡೆಯುವಂತೆ ಮೊದಲ ಪುಟದಲ್ಲಿ ಬರೆಯುವ ಜರುರತ್ತೆನಿದೆ? ವಿ. ಕ ಓದುಗ ಅಷ್ಟೊಂದು ಅಪ್ರಬುದ್ದನೆ?
3 >> ಪುಸ್ತಕ ಓದುವದು ಒಳ್ಳೆಯ ಅಭ್ಯಾಸ. ಆದರೆ ಕದಿಯುವ ಚಟ ಕೆಟ್ಟದ್ದು.
ಇದು ನಿಮಗೆ ಅರ್ಥ ಆಗ್ಬೇಕು ಅಂದ್ರೆ ಒಮ್ಮೆ public libraryಗೆ ಹೋಗಿ ಒಂದು ರೌಂಡ್ ಮಗಜಿನೆಸ್
ಮೇಲೆ ಕಣ್ಣು ಹಾಯಿಸಿದರೆ ಅರ್ಥ ಆಗುತ್ತೆ.
ಇಲ್ಲಿ "ಪುಸ್ತಕ ಕದಿಯುವ" ಅಂದಾದರೆ ವಾಕ್ಯ ಸರಿಯಾಗುತ್ತದೆ ಅನ್ನುವದು ನನಗೂ ಗೊತ್ತಿದೆ. ಅದಿಲ್ಲದಿದ್ದರೆ "ಬಸ್ ನಲ್ಲಿ ಪ್ರಯಾಣಿಸುವದು ಒಳ್ಳೆಯ ಅಭ್ಯಾಸ. ಸೈಕಲ್ ಕದಿಯಬೇಡಿ" ಅಂದಷ್ಟೇ ಅಸಂಭದ್ದ.
4 >> ಪತ್ರಿಕೆಗಳಿಗೆ ಬರೆಯಿರಿ. ಕನಿಷ್ಠ `ಸಂಪಾದಕರ ಪತ್ರ' ವಿಭಾಗಕ್ಕಾದರೂ ಬರೆಯಿರಿ.
ಇದರ ಅರ್ಥ ಪ್ರತಿಯೊಬ್ಬರಲ್ಲೂ ಬರಿಯೋ ಸಾಮರ್ಥ್ಯ ಇದೆ ಅದನ್ನ ಉಪಯೋಗಿಸಿ ಅಂತ ಅರ್ಥ ಅಲ್ವೇನ್ರೀ?
ನಾನ್ಯಾವಾಗ ಇಲ್ಲ ಅಂದೆ? ನಾನು ಬರೆದಿದ್ದೂ ಅದೇ ಕಾರಣಕ್ಕೆ.
ಅಂದಹಾಗೆ ನಾನ್ಯಾವ ಮಹಾನ್ ಬರಹಗಾರನು ಅಲ್ಲ ನಾನು ಬರೆದಿದ್ದೆಲ್ಲ ಸರಿ ಎನ್ನುವ ಶತಹುಂಬನೂ ನಾನಲ್ಲ. ಬರೀ ಹವ್ಯಾಸಕ್ಕಾಗಿ ಮಾತ್ರ ನನ್ನ ಈ ಬರಹಗಳು. ನನ್ನ ತಪ್ಪಿದ್ದರೆ ಯಾರ ಎದುರಿನಲ್ಲಿ ಬೇಕಾದರೂ ಒಪ್ಪಿಕೊಳ್ಳುವ ಮನಸ್ಥಿತಿ ಇದೆ. ಸಾರಿ ಅಂದ ಮಾತ್ರಕ್ಕೆ ನಮ್ಮ ಜೀವ ಹೋಗುವದಿಲ್ಲ ಅನ್ನುವದು ನನಗೆ ಗೊತ್ತಿದೆ.
@ Sandeepa Nadahalli and ವಿ.ರಾ.ಹೆ
tamma comment ge tumba dhanyavaadagaLu.
ಇತ್ತೀಚಿನ ದಿನಗಳಲ್ಲಿ ವಿಜಯ ಕರ್ನಾಟಕಕ್ಕೂ ಮತ್ತು ಕೊಳೆತ ಸೇಬುವಿಗು ತೀರ ವ್ಯತ್ಯಾಸವೇನು ಕಾಣಿಸ್ತಿಲ್ಲ. ವಿ.ಕ ಪೂರ್ತಿಯಾಗಿ ಕೊಳೆತು ನಾರುತ್ತಿದೆ. ಎಸೆದು ಕೈ ತೊಳೆದುಕೊಳ್ಳುವುದು ವಾಸಿ.
ನಾಲ್ಕು ಜನ ಹೀಗೆ ಮಾತನಾಡಿದರೆ ವಿಜಯಕರ್ನಾಟಕದ circulation ಏನು ಬಿದ್ದು ಹೋಗುತ್ಯೆ ? ತುಂಬ ಧೈರ್ಯವಂತರು ಸ್ವಾಮಿ ಅವರು. !
ಕೊಳೆತು ನಾರುವುದನ್ನೇ "ವಿಜಯ್ Fresh " ಅಂತ ಮುಂದೆ ಕೊಡ್ತಾರೆ ನೋಡಿ .
ನೀವು ಕೇಳಿರೋ ಪ್ರಶ್ನೆಗಳಿಗೆ ಕನಿಷ್ಟ ಸೌಜನ್ಯದ ಉತ್ತರವಾದರೂ ಭಟ್ಟರಿಂದ ಬರ್ಲಿ ಅಂತ ಆಶಿಸ್ತೇನೆ.
I had mailed ViBha on DGP ajay kumar singh issue.. my email bounced twice. you are lucky- you got at least one line reply from him!
@ Rajesh Manjunath - ರಾಜೇಶ್ ಮಂಜುನಾಥ್,
comment gagi dhanyavaadagaLu. bahuteekamandiya abhipraya idee aagide.
@ Subrahmanya : correct aagi helidri saar, jana enu kotru tagotaare annno attitude ivaraddu jasti aagta ide.
@ಚೆ೦ಬಾರ್ಪು: One of my friend also had a same experience on DGP Case.
Harsha,
Good post and good follow up emails. These days no one cares about pointing these mistakes, but the fact that you have taken time to work on these is very commendable.
I can see the mistakes that you have pointed out in VK, most of them look to me as if they are because of an incapable proof reader and writer mistakes(I am not into Journalism hence just a common sense assumption). But I am not sure how you are making allegations on VB's ego? Arent you taking a mistake from paper and making personal allegations on VB ?
I think this is a very good article if VK wants to correct itself, but I think we should argue on the actual mistakes rather than make these allegations.
-Cheers
Chin
ಸ್ವಾಮಿ,
ಆ ವಾಕ್ಯವ ಹೀಗೆ ಹೇಳಬಹುದಿತ್ತು:-
ಅರ್ಧ ಭಾಗ ಕೊಳೆತಿರುವ ಆಪಲನ್ನು ಬಿಸಾಡಬೇಕಾಗಿಲ್ಲ. [ಬೇಕಿಲ್ಲ ಎನ್ನುವ ಪ್ರಯೋಗ ನನಗನ್ನಿಸುವನ್ತೆ ತಪ್ಪು. ಅದು ತಮಿೞಿನಂಥ ಭಾಷೆಗಳಿನ್ದ ಕುರುಡಾಗಿ ನಾವು ಅನುಕರಿಸುತ್ತಿರುವ ರೀತಿ. "ಭಾಷೆಗಳಿನ್ದ" - ಹೀಗೆ ಬರೆದರೆ ತಪ್ಪೆನ್ನಬೇಡಿರಿ. ಪ್ರಯೋಗಶೀಲರಾಗೋಣ. ಸೇಬು ಎಂಬ ಪದದ ಬೞಕೆ ವ್ಯಾಪಕವಾಗಿರುವ ಮಾತ್ರಕ್ಕೆ ಅದು ಕನ್ನಡವಾಗಿಬಿಡದು. ನೀವು 'ಸೇಬುವನ್ನು' ಎನ್ನುತ್ತೀರಿ. ಉಕಾರದಿನ್ದ ಕೊನೆಗೊಳ್ಳುವ ಶಬ್ದಗಳಿಗೆ ಅನ್ನು ಎಂಬ ವಿಭಕ್ತಿ ಪ್ರತ್ಯಯ ಸೇರುವಾಗ 'ಸೇಬನ್ನು' ಎನ್ದಾಗಬೇಕು. ಈ ದೋಷಕ್ಕಾಗಿ ಈ ಬ್ಲಾಗ ಓದುವವರು ನಿಮ್ಮನ್ನು ತಿರಸ್ಕರಿಸಲಿಲ್ಲವೆನ್ದು ಗಮನಿಸಿರಿ. ] ಸಣ್ಣ ಪುಟ್ಟ ದೋಷಗಳಿಗಾಗಿ[ ದೋಷಗಳಿಗೆ ಎನ್ನುವ ಬದಲು] ವ್ಯಕ್ತಿಗಳನ್ನಾಗಲಿ, ಸ್ನೇಹಿತರನ್ನಾಗಲಿ ಪೂರ್ತಿ[ಪೂರ್ತಿಯಾಗಿ] ತಿರಸ್ಕರಿಸುವುದು ಸರಿಯಲ್ಲ. [ಸರಿ ಅಲ್ಲ ಎನ್ನುತ್ತ ಬಿಡಿಸಿ ಬರೆಯುವೆಡೆಯಲ್ಲಿ] ಅಂಥ ಗುಣವನ್ನು [ಗುಣಗಳನ್ನು] ಅಲಕ್ಷಿಸಿ [ನಿರ್ಲಕ್ಷಿಸಿ] ಅವರನ್ನು ಸಹಿಸಿಕೊಳ್ಳಬೇಕು [ಸಹಿಸಿಕೊಳ್ಳಬಹುದು ಎನ್ನುವ ಬದಲು ಸಹಿಸಿಕೊಳ್ಳಬೇಕು ಎನ್ದರೆ ಚೆನ್ನಾಗಿರುತ್ತದೆ.]
ತಮ್ಮ ಅವಗಾಹನೆಗಾಗಿ:
<<>>
"ಸೀಮೆ ಕನ್ನಡಾ" ಎನ್ನುವ ಬದಲು "ಸೀಮೆಯ ಕನ್ನಡ" ಎನ್ನಬೇಕು. ತಾವು ಶುದ್ಧ ವ್ಯಾಕರಣದ ನಿರೀಕ್ಷೆಯಲ್ಲಿದ್ದೀರಿ.
"ಕೊಳೆತ ಸೇಬು ತಿನ್ನೋದು" - ಕೊಳೆತ ಸೇಬನ್ನು ತಿನ್ನುವುದು.
"ಸ್ಪೂರ್ತಿನಾ ನಿಮಗೆ" - ಸ್ಫೂರ್ತಿಯೇ ತಮಗೆ?
ಅಪ್ ಡೇಟ್ - ಎರಡು ಪದಗಳೇನೋ ಎಂಬನ್ತೆ ಬರೆದಿದ್ದೀರಿ.
ಪ್ರಯಾಣದಲ್ಲಿ ಇದ್ದಾರೆ - ಪ್ರಯಾಣದಲ್ಲಿದ್ದಾರೆ. ತಾವು ಬರೆದುದು ಅಲಸೂರಿನ ಅರವನೂ ಮಾತನಾಡಬಹುದಾಗಿದ್ದ ಕನ್ನಡ.
ಇಮೇಲ್ ಗೆ - ಇಮೇಲಿಗೆ . ವ್ಯಂಜನಾನ್ತವಾಗಿರುವ ಪದಗಳಿಗೆ 'ಗೆ' ಎಂಬ ವಿಭಕ್ತಿ ಪ್ರತ್ಯಯ ಸೇರುವಾಗ 'ಇನ್' ಎಂಬುದು ಆಗಮವಾಗುವುದು. 'ಬರುವುದು' ಎಂಬ ಅರ್ಥದಲ್ಲೇ.
ಕೊನೆಯಳಲ್ಲಿ ಇದೆ - ಯಾವ 'ಳ' ಸ್ವಾಮಿ....['ಳ ಎಲ್ಲಿನ್ದ ಬನ್ತು' ಇದು ನಾನು ಕೇಳಹೊರಟಿದ್ದ ಪ್ರಶ್ನೆ. ]
ವಿಜಯಕರ್ನಾಟಕದಲ್ಲಿ ಬಂದ ಸ್ಪೂರ್ತಿಯ ಸೆಲೆ ಇದು -
ಬನ್ದ ಎನ್ನುವ ಬದಲ್ಲು ಪ್ರಕಟವಾದ ಎನ್ದಿರುತ್ತಿದ್ದರೆ....
"ಸ್ಪೂರ್ತಿಯ ಸೆಲೆ" - ಹೌದೇ... ನನಗೆ 'ಸ್ಪೂರ್ತಿಸೆಲೆ' ಎನ್ದಿರುವನ್ತೆ ಕಾಣಿಸುತ್ತಿದೆ.
"ಹೇಳಿದ್ರಲ್ಲವೇ" = ಹೇಳಿದ್ದರಲ್ಲವೇ.
"ಸರಿಯಾಗೋ ಓದು" = ಸರಿಯಾಗಿ ಓದು.
<<>>
'ಪುಸ್ತಕವ ಒಟ್ಟಾಗಿ ಕದಿಯುವ ಚಟ' ಎನ್ನುವುದೊನ್ದೇ ಆ ವಾಕ್ಯಕ್ಕೆ ಅರ್ಥವಲ್ಲ. 'ಪುಸ್ತಕದ ಭಾಗಗಳ ಕದಿಯುವುದು' ಎಂಬ ಅರ್ಥವೂ ಅದರಲ್ಲಿದೆ. ಅದೇ ಮಾತಿನ ಸ್ವಾರಸ್ಯ.
ತಮ್ಮ ಬೞಕೆಗಳ ಬಗೆಗೊನ್ದು ಕುಡಿನೋಟ....
<<<"ಬಸ್ ನಲ್ಲಿ ಪ್ರಯಾಣಿಸುವದು ಒಳ್ಳೆಯ ಅಭ್ಯಾಸ. ಸೈಕಲ್ ಕದಿಯಬೇಡಿ" >>>
ಬಸ್ ನಲ್ಲಿ = ಬಸ್ಸಿನಲ್ಲಿ ಎನ್ದಾಗಬೇಕು. ಸ್ಪೇಸ್ ಕೊಟ್ಟು ಬರೆಯಲು ಅವು ಎರಡು ವಿಭಿನ್ನ ಪದಗಳೇ?
ಆ ತಿದ್ದುಪಡಿಯ ನಾನೇ ಮಾಡಿಕೊಳ್ಳುವುದಾದರೆ ಎರಡು ಬೇರೆ ಬೇರೆ ವಾಕ್ಯಗಳಾಗಿರುವುದರಿನ್ದ ತಪ್ಪು ಕಾಣಿಸದು. ತಮ್ಮ ವಾಕ್ಯದಲ್ಲಿ 'ಆದರೆ' ಎಂಬ ಶಬ್ದವಿಲ್ಲ. [ಪದಕ್ಕೆ ಶಬ್ದವೆನ್ದೂ ಹೇಳಬಹುದು.]
ಅಸಂಭದ್ದ. = ಅಸಂಬದ್ಧ [ಬರಹ ಪ್ಯಾಡಿನಲ್ಲಿ ಬರೆಯುತ್ತಿರುವುದರಿನ್ದ ಧ ಎಂಬ ಮಹಾಪ್ರಾಣ ಇಲ್ಲಿ ಕಾಣಿಸುತ್ತಲಿಲ್ಲ. ]
<<>>
ನಾನು ಇಲ್ಲವೆನ್ದೆನೇ? ನಾನೂ ಆ ಕಾರಣಕ್ಕೇ ಬರೆದುದು..ಅಥವಾ ಬರೆದಿದ್ದು ಎನ್ನುವ ಬದಲಿಗೆ ಬರೆದದ್ದು ಎನ್ದಾದರು ಇರಬೇಕಾಗಿತ್ತು, ಕನಿಷ್ಠ ಪಕ್ಷದಲ್ಲಿ. ಇನ್ನುಳಿದನ್ತೆ ಹತ್ತು ಹಲವು ವ್ಯಾಕರಣ ದೋಷಗಳು. ಇನ್ದಿಗಿಷ್ಟು ಸಾಕು.
@ಕೃಷ್ಣಪ್ರಕಾಶ ಬೊಳುಂಬು
OK
ಹ್ಮ್.. ನಿವು ಬರೆದದ್ದೆಲ್ಲಾ ನಿಜವೇ..ಇಷ್ಟವಾಯಿತು VK ಗೆ ಪ್ರೂಫ್ ರೀಡರ್ ನೇಮಕ ಮಾಡಿಕೊಂಡಿಲ್ಲ ಅನಿಸುತ್ತೆ, ಅಥವಾ ತಾವು ಬರೆದ ಮೇಲೆ ತಪ್ಪಾದರೂ ಜನ VK ಅಲ್ವಾ ಅಂತ ಸುಮ್ಮನೆ ದುಡ್ಡು ಕೊಟ್ಟು ಏನು ಬರೆದರೂ ಓದುತ್ತಾರೆ ಎಂಬ ತಾತ್ಸಾರ ಇರಬಹುದಾ?? ತಪ್ಪಿಲ್ಲದ VK ಸಿಕ್ಕರೆ ಅದು VK ಅಲ್ಲಾ ಅಂತ ತಿಳಿಯಿರಿ! ಎಂದು ಅವರ VK ಯಲ್ಲಿ ಧಾರಾಳವಾಗಿ ಬರೆದುಕೊಳ್ಳಬಹುದು. ನನ್ನ ಸ್ನೇಹಿತ ತೋರಿಸಿದ್ದ ವಿಕೆಯ ಸಾಲುಗಳು ಇನ್ನೂ ನೆನಪಿದೆ, ವಿಷ್ಣುವರ್ದನ ನ ಸಾವಿನ ನಂತರ ಪ್ರಕಟವಾದ ಕಾಲಂ ಒಂದರಲ್ಲಿ ಅದೂ ಮುಖ ಪುಟದಲ್ಲಿ ಅಚ್ಚಾಗಿದ್ದ ಸಾಲುಗಳು ವಿಷ್ಣುವರ್ದನನಿಗೆ ಏಳು ಬಾರಿ "ಡಿ" ಸಂದಿದೆ. ಎಷ್ಟು ಹೇಳಿದರೂ ತಪ್ಪಿಲ್ಲದ VK impossible!
Post a Comment